kajavivi@gmail.com   |   0836-2255180

ಪೊಟೊ ಗ್ಯಾಲರಿ

ಪಟ್ಟಾಂಗ

ಆನ್ಲೈನ್ ಪ್ರವೇಶ

ವೀಡಿಯೊ ಗ್ಯಾಲರಿ

ಮೈಲಿಗಲ್ಲುಗಳು

2. 2011 ರ ಜುಲೈ 27 ರಂದು ಪ್ರೊ. ಅಂಬಳಿಕೆ ಹಿರಿಯಣ್ಣ ಅವರನ್ನು ನೂತನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ನೇಮಿಸಲಾಯಿತು.

3. 2011 ರ ನವೆಂಬರ್ 29 ರಂದು ಜಾನಪದ ವಿಶ್ವವಿದ್ಯಾಲಯದ ಲಾಂಛನ, ಧ್ಯೇಯವಾಕ್ಯ ಹಾಗೂ ವೆಬ್ ಸೈಟ್ ಅನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಬಿಡುಗಡೆಗೊಳಿಸಿದರು.

4. 2011 ರ ಡಿಸೆಂಬರ್ 10 ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧ್ಯಾದೇಶ-2011 ಕ್ಕೆ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿತು. ಈ ಮಸೂದೆಯನ್ನು ನೂತನ ಕಾಯ್ದೆಯನ್ವಯ ಸದನದ ಒಪ್ಪಿಗೆ ಪಡೆದು ಜಾರಿಗೊಳಿಸಲಾಯಿತು.

5. 2011 ರ ಡಿಸೆಂಬರ್ 15 ರಂದು ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಸಂಬಂಧದ ಅಧ್ಯಾದೇಶಕ್ಕೆ ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದ ಅಂಗೀಕಾರ ದೊರಕಿತು.

6. 2012 ರ ಜನವರಿ 25 ರಂದು ಕರ್ನಾಟಕ ವಿಧಾನ ಪರಿಷತ್ತಿನಿಂದ 'ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮ-2011' ಅಂಗೀಕಾರವಾಯಿತು.

7. 2012 ರ ಫೆಬ್ರವರಿ 4 ರಂದು ವಿಧಾನಸಭೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ವಿಧೇಯಕವನ್ನು ಮಂಡಿಸಲಾಯಿತು.

8. 2012 ರ ಫೆಬ್ರವರಿ 21 ರಂದು ಜಾನಪದ ವಿಶ್ವವಿದ್ಯಾಲಯದ ವಿಧೇಯಕಕ್ಕೆ ರಾಜ್ಯಪಾಲರಾದ ಶ್ರೀ ಹಂಸರಾಜ ಭಾರದ್ವಾಜ ಅವರಿಂದ ಅಂಕಿತ ದೊರಕಿತು.

9. 2012 ರ ಕರ್ನಾಟಕ ಅಧಿನಿಯಮ ಸಂಖ್ಯೆ:11, 2012 ರ ಫೆಬ್ರವರಿ 23 ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಯಿತು.

10. 2012 ರ ಮೇ 27 ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಪರಿಷತ್ತಿಗೆ ಸದಸ್ಯರ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿತು.