kajavivi@gmail.com   |   0836-2255180
ಪ್ರಕಟಣೆ
List of Eligible Candidates for Ph.D. Interview –2022-23 - Entrance Exam Passed   |   Eligibility List of NET/KSET/JRF Candidates for Ph.D. Interview – 2022-23   |   Interview of Ph.D. students for the year 2022-23-reg   |   Ph.D. Entrance Exam Results for the year 2022-23   |   Eligibility List of NET/KSET/JRF qualified students who have applied, as per the notification issued regarding Ph.D. for the year 2022-23.   |   Extension of Admission Notification   |   Temporary Assistant Professor Recruitment_Application Form   |   Temporary Assistant Professor Recruitment Notification -2024-25   |   Admission Notification for PG, PG Diploma, UG Diploma & Certificate Courses for the year 2024-25-ENGLISH   |   Documents required for admission to various postgraduate courses for the academic year 2024-25-reg   |   Admission Notification for PG, PG Diploma, UG Diploma & Certificate Courses 2024-25   |   8th and 9th Convocation Notification-reg   |   Submission of objection to the provisional answer key of the Ph.D entrance examination-reg   |   Postponement of First and Third Semester Examinations 2024-reg   |   GEC/OEC Papers for the academic year 2023-24-reg.   |   2023-24 Ph.D. Entrance Exam: Subjects and Syllabus-reg   |   Notice: Students appearing for the Ph.D. entrance examination for the year 2023-24.   |   The fixation of Ph.D. degree study fees for the academic year 2024-25   |   List of Students Exempted from Ph.D Entrance Examination.   |   List of Students Eligible for Ph.D Entrance Examination   |   Ph.D Entrance Examination for the year 2023-24-reg   |  
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಯಾವುದೇ ದೇಶ ಅಥವಾ ನಾಡಿನ ಶ್ರೀಮಂತಿಕೆಯನ್ನು ಅಳೆಯಲು ಆ ನಾಡಿನ ಸಂಸ್ಕೃತಿ ಮತ್ತು ಪರಂಪರೆ, ಅಲ್ಲಿಯ ಜೀವನ ವಿಧಾನ ಮತ್ತು ಆ ಜನರು ಅನುಸರಿಸುವ ಮೌಲ್ಯಾದರ್ಶಗಳು ಮುಖ್ಯವಾಗುತ್ತವೆ. ಅಂಥ ಶ್ರೀಮಂತ ಇತಿಹಾಸ ಮತ್ತು ಪರಂಪರೆಯುಳ್ಳ ನಾಡು ಕರ್ನಾಟಕ. ಈ ನೆಲದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಎಲ್ಲವೂ ವಿಶಿಷ್ಟ ಹಾಗೂ ಅನನ್ಯ. ಅಂತೆಯೇ ಈ ಕಲೆ, ಸಂಸ್ಕೃತಿ ಮತ್ತು ಜ್ಞಾನಪರಂಪರೆಗಳು ಅಳಿಸಿ ಹೋಗದಂತೆ ಮಾಡಲು ಹಾಗೂ ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕು ಗೊಟಗೋಡಿಯಲ್ಲಿ ಪ್ರಪಂಚದಲ್ಲೇ ಮೊದಲನೆಯದಾದ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ.

ಕರ್ನಾಟಕ ಅಮೂಲ್ಯ ಹಾಗೂ ಸಮೃದ್ಧ ಜಾನಪದ ಸಂಪತ್ತಿನ ಆಗರವಾಗಿದೆ. ಈ ಜ್ಞಾನದ ಅನನ್ಯತೆಯನ್ನು ಶೋಧಿಸುವ, ಸಂರಕ್ಷಿಸುವ ಹಾಗೂ ಸಂವರ್ಧನೆಯ ಕಾರ್ಯವನ್ನು ನಿರ್ವಹಿಸುವ ಉದ್ದೇಶಕ್ಕಾಗಿ, ಅನಂತ ವೈವಿಧ್ಯದ ಈ ಜ್ಞಾನದ ಸಂಗ್ರಹ, ಸಂಪಾದನೆ, ಕಲಿಕೆ, ಪ್ರದರ್ಶನ ಕಾರ್ಯಗಳು ಇನ್ನೂ ತೀವ್ರಗತಿಯಲ್ಲಿ ಪ್ರಮಾಣಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸುವ ಉದ್ದೇಶಕ್ಕಾಗಿ ಜಾನಪದ ವಿಶ್ವವಿದ್ಯಾಲಯವನ್ನು ರೂಪಿಸಿದೆ.

ಜಾನಪದ ವಿಶ್ವವಿದ್ಯಾಲಯದ ಕೇಂದ್ರಸ್ಥಾನದ ಆವರಣ ಸುಂದರ ಪ್ರಾಕೃತಿಕ ಪರಿಸರದಲ್ಲಿದ್ದು ಉನ್ನತ ಶಿಕ್ಷಣಕ್ಕೆ ಸೂಕ್ತ ತಾಣವಾಗಿದೆ. ಜಿಲ್ಲಾ ಕೇಂದ್ರವಾಗಿರುವ ಹಾವೇರಿ ಪಟ್ಟಣದಿಂದ 36 ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರವಾದ ಶಿಗ್ಗಾವಿಯಿಂದ 6 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ `ಗೊಟಗೋಡಿ' ಎಂಬ ಸ್ಥಳದಲ್ಲಿ ಈ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದೆ.

ಜಾನಪದ ವಿಶ್ವವಿದ್ಯಾಲಯ ಒಂದು ಅನನ್ಯವಾದ ಶೈಕ್ಷಣಿಕ ಚಹರೆಯನ್ನು ಧಾರಣಗೊಳಿಸಿಕೊಂಡಿದ್ದು, ಪ್ರಸಕ್ತಕಾಲದ ಅಗತ್ಯಗಳಿಗನುಗುಣವಾಗಿ ದೇಶೀ ಜ್ಞಾನ ಪರಂಪರೆಗಳ ಅಧ್ಯಯನ ಹಾಗೂ ಅವುಗಳ ಸಂವರ್ಧನೆಗೆ ಕಟಿಬದ್ಧವಾಗಿದೆ. ಜನಪದರ ಲೋಕದೃಷ್ಟಿ, ಅವರ ವಿವೇಕ ಹಾಗೂ ಜಾಗತೀಕರಣದಿಂದಾಗಿ ತೀವ್ರಗತಿಯಲ್ಲಿ ಬದಲಾಗುತ್ತಿರುವ ಪ್ರಪಂಚಕ್ಕೆ ಪರ್ಯಾಯ ಜ್ಞಾನ ಆಕರವಾಗಿ ಅದರ ಪ್ರಸ್ತುತತೆಗೆ ವಿಶ್ವವಿದ್ಯಾಲಯ ವಿಶೇಷ ಗಮನಹರಿಸುತ್ತದೆ. ಶಿಷ್ಟ ಭಾಷೆಯ ಯಾಜಮಾನ್ಯಕ್ಕೆ ಭಿನ್ನವಾಗಿ ಮೌಖಿಕತೆಯಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಮೌಖಿಕ ಸಂಕಥನಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಮುಂದೆ ಓದಿ

ಸುದ್ದಿಗಳು ಮತ್ತು ಕಾರ್ಯಕ್ರಮಗಳು
ಅಧಿಸೂಚನೆಗಳು
  •  2022-23 ನೇ ಸಾಲಿನ ಪಿಎಚ್.ಡಿ ಸಂದರ್ಶನ - ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳ ಪಟ್ಟಿ ... ಮುಂದೆ ಓದಿ...
  •  2022-23 ನೇ ಸಾಲಿನ ಪಿಎಚ್.ಡಿ ಸಂದರ್ಶನ - NET /KSET/JRF ಅರ್ಹತೆ ಹೊಂದಿದ ಅಭ್ಯರ್ಥಿಗಳ - ಅರ್ಹತಾ ಪಟ್ಟಿ ... ಮುಂದೆ ಓದಿ...
  •  2022-23 ನೇ ಸಾಲಿನ ಪಿಎಚ್.ಡಿ ವಿದ್ಯಾರ್ಥಿಗಳ ಸಂದರ್ಶನ ಕುರಿತು ... ಮುಂದೆ ಓದಿ...
  •  2022-23 ನೇ ಸಾಲಿನ ಪಿಎಚ್.ಡಿ ಪ್ರವೇಶಾತಿ ಪರೀಕ್ಷೆ ಫಲಿತಾಂಶ ಪಟ್ಟಿ ... ಮುಂದೆ ಓದಿ...
  •  2022-23 ನೇ ಸಾಲಿನಲ್ಲಿ ಪಿಎಚ್.ಡಿ ಪ್ರವೇಶಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಿದವರ NET /KSET/JRF ಅರ್ಹತೆ ಹೊಂದಿದ ವಿದ್ಯಾರ್ಥಿಗಳ ವಿವರ ... ಮುಂದೆ ಓದಿ...
  •  ಪ್ರವೇಶಾತಿ ಅವಧಿ ವಿಸ್ತರಣೆ ... ಮುಂದೆ ಓದಿ...
  •  ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ _ಅರ್ಜಿ ನಮೂನೆ ... ಮುಂದೆ ಓದಿ...
  •  ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ 2024-25 ... ಮುಂದೆ ಓದಿ...
  •  2024-25 ಶೈಕ್ಷಣಿಕ ವರ್ಷಕ್ಕೆ ವಿವಿಧ ಕೋರ್ಸ್‌ಗಳ ಶುಲ್ಕದ ವಿವರಗಳು ... ಮುಂದೆ ಓದಿ...
  •  2024-25 ನೇ ಸಾಲಿನ PG ಡಿಪ್ಲೋಮಾ,UG ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸಗಳ ಪ್ರವೇಶಾತಿ ಅಧಿಸೂಚನೆ-ಇಂಗ್ಲೀಷ್ ... ಮುಂದೆ ಓದಿ...
  •  2024-25ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ವಿಭಾಗಗಳಿಗೆ ಪ್ರವೇಶಾತಿಗೆ ಅವಶ್ಯವಿರುವ ದಾಖಲಾತಿಗಳ ಕುರಿತು ... ಮುಂದೆ ಓದಿ...
  •  2024-25 ನೇ ಸಾಲಿನ PG ಡಿಪ್ಲೋಮಾ,UG ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸಗಳ ಪ್ರವೇಶಾತಿ ಅಧಿಸೂಚನೆ ... ಮುಂದೆ ಓದಿ...
  •  8 ಮತ್ತು 9 ನೇ ಘಟಿಕೋತ್ಸವ ಅಧಿಸೂಚನೆ ಕುರಿತು. ... ಮುಂದೆ ಓದಿ...
  •  ಪಿಎಚ್.ಡಿ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಉತ್ತರಗಳ ಕೀ ( Answer Key) ಗಳಿಗೆ ಆಕ್ಷೇಪಣೆ ಸಲ್ಲಿಸುವ ಕುರಿತು ... ಮುಂದೆ ಓದಿ...
  •  ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆಗಳನ್ನು ಮೂಂದೂಡಿರುವ ಕುರಿತು. ... ಮುಂದೆ ಓದಿ...
  •  2023-24 ನೇ ಶೈಕ್ಷಣಿಕ ಸಾಲಿನ GEC/OEC ಪ್ರತಿಕೆಗಳ ಕುರಿತು. ... ಮುಂದೆ ಓದಿ...
  •  2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆ ಸಹವರ್ತಿ ವಿಷಯಗಳ ಸಂಬಂಧಿಸಿದಂತೆ ಪಠ್ಯಕ್ರಮ _ಅರ್ಥಶಾಸ್ತ್ರ ... ಮುಂದೆ ಓದಿ...
  •   2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆ ಸಹವರ್ತಿ ವಿಷಯಗಳ ಸಂಬಂಧಿಸಿದಂತೆ ಪಠ್ಯಕ್ರಮ_MBA_TTM ... ಮುಂದೆ ಓದಿ...
  •  2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆ ಸಹವರ್ತಿ ವಿಷಯಗಳ ಸಂಬಂಧಿಸಿದಂತೆ ಪಠ್ಯಕ್ರಮ_MBA-RTM ... ಮುಂದೆ ಓದಿ...
  •  2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆ ಸಹವರ್ತಿ ವಿಷಯಗಳ ಸಂಬಂಧಿಸಿದಂತೆ ಪಠ್ಯಕ್ರಮ_ಮಹಿಳಾ ಅಧ್ಯಯನ ... ಮುಂದೆ ಓದಿ...
  •  2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆ ಸಹವರ್ತಿ ವಿಷಯಗಳ ಸಂಬಂಧಿಸಿದಂತೆ ಪಠ್ಯಕ್ರಮ_ಜಾನಪದ ಸಾಹಿತ್ಯ ... ಮುಂದೆ ಓದಿ...
  •  2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆ ಸಹವರ್ತಿ ವಿಷಯಗಳ ಸಂಬಂಧಿಸಿದಂತೆ ಪಠ್ಯಕ್ರಮ_ಜಾನಪದ ವಿಜ್ಞಾನ ... ಮುಂದೆ ಓದಿ...
  •  2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆ ವಿಷಯ ಹಾಗೂ ಪಠ್ಯಕ್ರಮ ಕುರಿತು. ... ಮುಂದೆ ಓದಿ...
  •  2023-24 ನೇ ಸಾಲಿನ ಪಿಎಚ್.ಡಿ ಪ್ರವೇಶ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸೂಚನೆ ಕುರಿತು. ... ಮುಂದೆ ಓದಿ...
  •  2024- 25 ನೇ ಶೈಕ್ಷಣಿಕ ಸಾಲಿನ ಪಿಎಚ್. ಡಿ ಪದವಿ ಅಧ್ಯಯನ ಶುಲ್ಕ ನಿಗದಿಪಡಿಸುವ ಕುರಿತು. ... ಮುಂದೆ ಓದಿ...
  •  ಪಿ.ಎಚ್.ಡಿ. ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಪಡೆದ ವಿದ್ಯಾರ್ಥಿಗಳ ಪಟ್ಟಿ. ... ಮುಂದೆ ಓದಿ...
  •  ಪಿ.ಎಚ್.ಡಿ. ಪ್ರವೇಶ ಪರೀಕ್ಷೆಗೆ ಅರ್ಹರಾಗಿರುವ ವಿದ್ಯಾರ್ಥಿಗಳ ಪಟ್ಟಿ ... ಮುಂದೆ ಓದಿ...
Karnataka Janapada Vishwavidyalaya
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಜಾನಪದ ವಿಶ್ವವಿದ್ಯಾಲಯ ಒಂದು ಅನನ್ಯವಾದ ಶೈಕ್ಷಣಿಕ ಚಹರೆಯನ್ನು ಧಾರಣಗೊಳಿಸಿಕೊಂಡಿದ್ದು, ಪ್ರಸಕ್ತಕಾಲದ ಅಗತ್ಯಗಳಿಗನುಗುಣವಾಗಿ ದೇಶೀ ಜ್ಞಾನ ಪರಂಪರೆಗಳ ಅಧ್ಯಯನ ಹಾಗೂ ಅವುಗಳ ಸಂವರ್ಧನೆಗೆ ಕಟಿಬದ್ಧವಾಗಿದೆ.
ನಮ್ಮ ದೃಷ್ಟಿಕೋನಗಳು

ಜಾನಪದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸಲೆಂಬ ವಿಶಿಷ್ಟ ಗುರಿಯನ್ನು ಸಾಧಿಸಲಿಕ್ಕಾಗಿಯೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆರಂಭಗೊಂಡಿದೆ. ಕರ್ನಾಟಕ ಘನ ಸರ್ಕಾರವು ಸಮಸ್ತ ಕನ್ನಡ ಜನರ ಆಶೋತ್ತರಗಳಿಗೆ ಸ್ಫಂದಿಸಲೆಂದೇ ಕರ್ನಾಟಕ ಜನಪದ ಸಂಸ್ಕೃತಿಯನ್ನು ಅಧ್ಯಯನ ಮಾಡಲೆಂದು ಹಾಗೂ ಕನ್ನಡ ಜಾನಪದ ವಿಜ್ಞಾನದ ಬೆಳವಣಿಗೆಗೆಂದೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಪಶ್ಚಿಮಕ್ಕೆ ಸಹ್ಯಾದ್ರಿಯ ಪರ್ವತದ ಕೊನೆಯ ಅಂಚಿನ ಹಾಗೂ ಪೂರ್ವಕ್ಕೆ ಬಯಲುಸೀಮೆಯ ವಿಶಾಲ ಮೈದಾನ ಭೂಮಿಯಲ್ಲಿಯ ನಡುವಿನ ಸುಂದರ ಭೌಗೋಳಿಕ ಪರಿಸರದ ನಡುವಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಈ ವಿಶ್ವವಿದ್ಯಾಲಯವು ತಲೆಯೆತ್ತಿದೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಅರ್ಥಪೂರ್ಣ ನೆರವಿನಿಂದ ಕರ್ನಾಟಕ ಸಂಸ್ಕೃತಿಯಲ್ಲಿಯೇ ಬಹು ವೈವಿಧ್ಯವನ್ನು ಸಾಂಸ್ಕೃತಿಕ ಸಿರಿವಂತಿಕೆಯನ್ನು ಹೊಂದಿರುವ ಕರ್ನಾಟಕದ ಜನಪದ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಪರಿಚಯಿಸುವ ಹಾಗೂ ಅಧ್ಯಯನದ ಮೂಲಕ ಅದರ ಅಂತಃಸತ್ವವನ್ನು ತಿಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ಬಹುಭಾಷಾ ಸಂಸ್ಕೃತಿಯ ದೇಶವಾದ ಭಾರತದಲ್ಲಿ ಕನ್ನಡ ಸಂಸ್ಕೃತಿಯ ಕುರಿತು ಅರ್ಥಪೂರ್ಣವಾಗಿ ಅಧ್ಯಯನ ನಡೆಸಲು ಸಾಧ್ಯವಾಗಬಲ್ಲಂತಹ ಅದಕ್ಕೆ ಅವಕಾಶ ಒದಗಿಸುವ ಮೂಲಕ ಉನ್ನತ ಶಿಕ್ಷಣ ಕೇತ್ರದಲ್ಲಿಯೇ ಹೊಸ ಮಜಲನ್ನು ಸೃಷ್ಟಿಸಿದ ಕೀರ್ತಿಗೆ ಕರ್ನಾಟಕವು ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದೆ.

ನಮ್ಮ ಕಾರ್ಯಯೋಜನೆಗಳು

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವೆಂಬುದು ಕೇವಲ ಉನ್ನತ ಶಿಕ್ಷಣ ನೀಡುವ ಸಂಸ್ಥೆಯಾಗದೆ ಜನಪದರ ಬದುಕಿನ ಎಲ್ಲಾ ಮಗ್ಗುಲುಗಳಲ್ಲಿಯೂ ಇರಬಹುದಾದ ಬದುಕು-ಬವಣೆ, ಸವಾಲು-ಸೋಲು-ಗೆಲುವು, ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಬದಲಾವಣೆಯ ತೀವ್ರತೆ, ಜಾಗತೀಕರಣದ ಪರಿಣಾಮ - ಹೀಗೆ ಹಲವು ಬಗೆಯ ಏರಿಳಿತಗಳ ಕುರಿತು ನಿರಂತರ ಅವಲೋಕನ, ಸಂಶೋಧನೆ ನಡೆಸುವ ಉನ್ನತ ಸ್ತರದ ಸಂಶೋಧನಾಲಯವೇ ಆಗಿದೆ. ಅಂತೆಯೇ ಅಭಿವೃದ್ಧಿ ಮಾರ್ಗಸೂಚಿ ಹಾಗೂ ಸಮಸ್ಯೆಗಳಿಗೆ ಪರಿಹಾರ, ಮಾರ್ಗೋಪಾಯಗಳನ್ನು ಸಂದರ್ಭಕ್ಕೆ ಪೂರಕವಾಗಿ ಒದಗಿಸುವ ಮೂಲಕ ಸಾಮಾಜಿಕವಾಗಿ ವಿಶಿಷ್ಟವಾದ ಬಾಧ್ಯತೆಯನ್ನು ನಿರಂತರವಾಗಿ ನಿರ್ವಹಿಸಬೇಕಾದ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯಯೋಜನೆ ರೂಪಿಸಬೇಕಾದ ಹೊಣೆಗಾರಿಕೆಯನ್ನು ಮನದಟ್ಟು ಮಾಡಿಕೊಂಡು ಮುಂದಿನ ಹೆಜ್ಜೆಗಳನ್ನು ಇಡಲಾರಂಭಿಸಿದೆ.